Widgets Magazine

ಯಾವಾಗ ಕನ್ಯತ್ವ ಕಳೆದುಕೊಂಡೆ ಎಂಬ ಅಭಿಮಾನಿಯ ಪ್ರಶ್ನೆಗೆ ನಟಿ ಇಲಿಯಾನಾ ಉತ್ತರಿಸಿದ್ದು ಏನು ಗೊತ್ತಾ?!

ಮುಂಬೈ| Krishnaveni K| Last Modified ಗುರುವಾರ, 5 ಸೆಪ್ಟಂಬರ್ 2019 (09:38 IST)
ಮುಂಬೈ: ಸಿನಿಮಾ ತಾರೆಯರು ತಮ್ಮ ಅಭಿಮಾನಿಗಳಿಗೆ ಹತ್ತಿರವಾಗಲು ಆಗಾಗ ಇನ್ ಸ್ಟಾಗ್ರಾಂನಲ್ಲಿ ಪ್ರಶ್ನೋತ್ತರ ನಡೆಸುವುದು ಸಾಮಾನ್ಯ.

 
ಈ ಪ್ರಶ್ನಾವಳಿಗಳಲ್ಲಿ ಹೆಚ್ಚಿನವರು ತಮ್ಮ ನೆಚ್ಚಿನ ತಾರೆಗೆ ಏನು ಇಷ್ಟ ಯಾವುದು ಕಷ್ಟ ಇತ್ಯಾದಿ ಪ್ರಶ್ನೆ ಕೇಳುತ್ತಾರೆ. ಆದರೆ ನಟಿ ಇಲಿಯಾನಾಗೆ ವ್ಯಕ್ತಿಯೊಬ್ಬ ಇಂತಹದ್ದೇ ಪ್ರಶ್ನೋತ್ತರ ಸೆಷನ್ ನಲ್ಲಿ ನಿನ್ನ ಕನ್ಯತ್ವ ಯಾವಾಗ ಕಳೆದುಕೊಂಡೆ ಎಂದು ಅಶ್ಲೀಲ ಪ್ರಶ್ನೆ ಮಾಡಿದ್ದಾನೆ.
 
ಇದನ್ನು ಶೇರ್ ಮಾಡಿರುವ ಇಲಿಯಾನಾ ಆತನಿಗೆ ಸರಿಯಾದ ಉತ್ತರವನ್ನೇ ಕೊಟ್ಟಿದ್ದಾಳೆ. ‘ವಾವ್. ಭಾರೀ ಕುತೂಹಲ ಇದ್ದ ಹಾಗೆ ಇದೆ. ನಿನ್ನ ಅಮ್ಮ ಏನು ಹೇಳ್ತಾರೆ?’ ಎಂದು ತಿರುಗೇಟು ಕೊಟ್ಟಿದ್ದಾರೆ ಇಲಿಯಾನ. ಇತ್ತೀಚೆಗೆ ನಟ ಜಾಕಿ ಶ್ರಾಫ್ ಗೂ ಇಂತಹದ್ದೇ ಪ್ರಶ್ನೋತ್ತರ ಸೆಷನ್ ನಲ್ಲಿ ಇಂತಹದ್ದೇ ಪ್ರಶ್ನೆ ಎದುರಾಗಿ ಅಭಿಮಾನಿಯೊಬ್ಬ ಮುಜುಗರವುಂಟು ಮಾಡಿದ್ದ.
ಇದರಲ್ಲಿ ಇನ್ನಷ್ಟು ಓದಿ :