ಬೆಂಗಳೂರು: ಕನ್ನಡ ಧಾರವಾಹಿ, ಸಿನಿಮಾಗಳಲ್ಲಿ ಸಹಕಲಾವಿದೆಯಾಗಿ ನಟಿಸುತ್ತಿದ್ದ ನಟಿಯೊಬ್ಬರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಕುಣಿಗಲ್ ಗಿರಿ ಸಹೋದರ ಹರೀಶ್ ಎಂಬಾತನನ್ನು ವಿರುದ್ಧ ದೂರು ದಾಖಲಾಗಿದೆ.ಹೆಗ್ಗನಹಳ್ಳಿ ನಿವಾಸಿಯಾದ ಯುವತಿ ಏಕಾಂಗಿಯಾಗಿ ವಾಸ ಮಾಡುತ್ತಿದ್ದರು. ಇದನ್ನು ಅರಿತ ಆರೋಪಿ ಆಕೆ ಜೊತೆ ಸ್ನೇಹ ಸಂಪಾದಿಸಿ ಪ್ರೀತಿಯ ನಾಟಕವಾಡಿದ್ದಾನೆ. ಬಳಿಕ ಮನೆಯಲ್ಲಿಯೇ ತಾಳಿ ಕಟ್ಟಿದ್ದಾನೆ. ಬಳಿಕ ಚಿನ್ನಾಭರಣ, 2.50 ಲಕ್ಷ ಹಣದೊಂದಿಗೆ ಪರಾರಿಯಾಗಿದ್ದಾನೆ.ಕೆಲವು ದಿನಗಳ ಬಳಿಕ ಯುವತಿ ನ್ಯಾಯ ಕೇಳಲು ಆತನ ಮನೆಗೆ