Widgets Magazine

ನಟ ದರ್ಶನ್ ಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ಮ್ಯಾನೇಜರ್ ಮಲ್ಲಿಕಾರ್ಜುನ್

ಬೆಂಗಳೂರು| pavithra| Last Modified ಬುಧವಾರ, 11 ಜುಲೈ 2018 (18:25 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಎಲ್ಲ ವ್ಯವಹಾರಗಳನ್ನು
ನೋಡಿಕೊಳ್ಳುತ್ತಿದ್ದ ಅವರ ಮ್ಯಾನೇಜರ್ ಮಲ್ಲಿಕಾರ್ಜುನ್ ಬಿ. ಸಂಕನಗೌಡರ್ ಅಲಿಯಾಸ್ ಮಲ್ಲಿ ದರ್ಶನ್ ಅವರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿದ ವಿಷಯ ಬೆಳಕಿಗೆ ಬಂದಿದೆ.


ಸುಮಾರು 10 ಕೋಟಿ ರೂ. ತೆಗೆದುಕೊಂಡು, ಊರಿಗೆ ಹೋಗಿ ಬರೋದಾಗಿ ಹೇಳಿ ಹೋದ ಮಲ್ಲಿಕಾರ್ಜುನ್, 10ದಿನ ಕಳೆದರೂ ದರ್ಶನ್ ಅವೆ ಸಂಪರ್ಕಕ್ಕೆ ಸಿಗದೆ ತನ್ನ ಮೊಬೈಲ್ ಸ್ವಿಚಾಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ. ಅಲ್ಲದೇ ದರ್ಶನ್ ಅವರ

ಹೆಸರು ಹೇಳಿಕೊಂಡು ಸಾಲ ಕೂಡ ಮಾಡಿದ್ದ ಎಂಬುದಾಗಿ ತಿಳಿದುಬಂದಿದೆ.


ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟ ಮಲ್ಲಿ ನಂತರ ದರ್ಶನ್ ರವರ ನಂಬಿಕೆ ಗಳಿಸಿ ಅವರ ಎಲ್ಲಾ ವಹಿವಾಟುಗಳನ್ನು ನೋಡಿಕೊಳ್ಳುವ ಮಟ್ಟಕ್ಕೆ ಬೆಳೆದಿದ್ದರು. ದರ್ಶನ್ ಕೂಡ ಅವರನ್ನು ಅಷ್ಟೇ ನಂಬಿದ್ದರು. ಈ ಹಿಂದೆ ಇವನ ಬಗ್ಗೆ ವಂಚನೆ ಪ್ರಕರಣಗಳು ಕೇಳಿ ಬಂದಿದ್ದರೂ ಸಹ ಈತನ ಮೇಲಿದ್ದ ನಂಬಿಕೆಯಿಂದ ದರ್ಶನ್ ಅವರಾಗಲಿ ದಿನಕರ್ ಅವರಾಗಲಿ, ಆ ಯಾವ ದೂರುಗಳಿಗೂ ಕಿವಿ ಕೊಟ್ಟಿರಲಿಲ್ಲವಂತೆ. ಅವರ ಈ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವುದಕ್ಕೆ
ಸ್ವತಃ ದರ್ಶನ್ ಅವರಿಗೂ ಕೂಡ ನೋವನ್ನುಂಟು ಮಾಡಿದೆಯಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :