ಬೆಂಗಳೂರು: ದಿಯಾ, ಕರ್ವ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಲ್ಲಿ ಹೊಸ ಭರವಸೆ ಹುಟ್ಟಿಸಿದ್ದ ಅದೇ ಚಿತ್ರತಂಡ ನಿರ್ಮಿಸಿರುವ ಸಿನಿಮಾ ಮನೆ ನಂ.13. ಇದೊಂದು ಪಕ್ಕಾ ಹಾರರ್ ಸಿನಿಮಾ. ಆರಂಭದಿಂದಲೂ ಕೊನೆಯವರೆಗೂ ಗುಂಡಿಗೆ ಗಟ್ಟಿ ಮಾಡಿಕೊಂಡೇ ನೋಡಬೇಕಾದ ಸಿನಿಮಾ. ಐಟಿ ಕಂಪನಿಯಲ್ಲಿ ಕೆಲಸ ಮಾಡುವ ನಾಲ್ಕೈದು ಮಂದಿ ಸ್ನೇಹಿತರ ಗುಂಪು ಹೊಸ ಮನೆಯೊಂದಕ್ಕೆ ಶಿಫ್ಟ್ ಆಗುತ್ತದೆ. ಮೊದಲ ದಿನದಿಂದಲೂ ಅಲ್ಲಿ ಭೂತದ ಕಾಟ. ಆ ಮನೆಯಲ್ಲಿ ಏನೋ ಸಮಸ್ಯೆಯಿದೆ