ಚೆನ್ನೈ: ಲಿಯೋ ಸಿನಿಮಾದಲ್ಲಿ ಸಹನಟನಾಗಿದ್ದ ಮನ್ಸೂರ್ ಅಲಿ ಖಾನ್ ನಾಯಕಿ ತ್ರಿಷಾ ಬಗ್ಗೆ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.ತ್ರಿಷಾ ನಾಯಕಿ ಎಂದು ಗೊತ್ತಾದಾಗ ಆಕೆ ಜೊತೆ ಬೆಡ್ ರೂಂ ದೃಶ್ಯ ಅಥವಾ ರೇಪ್ ದೃಶ್ಯವಿರಬಹುದು ಎಂದು ಭಾವಿಸಿದ್ದೆ. ಆದರೆ ಇಡೀ ಸಿನಿಮಾದಲ್ಲಿ ಆಕೆಯ ಮುಖವೇ ತೋರಿಸಲಿಲ್ಲ ಎಂದು ಆಕ್ಷೇಪಾರ್ಹವಾಗಿ ಮನ್ಸೂರ್ ಹೇಳಿಕೆ ನೀಡಿದ್ದರು.ಅವರ ಹೇಳಿಕೆ ವಿರುದ್ಧ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಸ್ವತಃ ತ್ರಿಷಾ ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದರು.