ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್-ಸುಮಲತಾ ದಂಪತಿ ಪುತ್ರ ಅಭಿಷೇಕ್ ಅಂಬರೀಶ್ ಜೂನ್ 5 ರಂದು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.ಈಗಾಗಲೇ ಸುಮಲತಾ ಅಂಬರೀಶ್ ಮಗನ ಮದುವೆಗಾಗಿ ಗಣ್ಯಾತಿಗಣ್ಯರನ್ನು ಆಹ್ವಾನಿಸಿದ್ದಾರೆ. ಬೆಂಗಳೂರಿನಲ್ಲಿ ಮದುವೆ-ಆರತಕ್ಷತೆ ಜೊತೆಗೆ ಮಂಡ್ಯದಲ್ಲಿ ಮತ್ತೊಮ್ಮೆ ಆರತಕ್ಷತೆ ನಡೆಯಲಿದೆ. ಇದಕ್ಕೆ ಪ್ರಧಾನಿ ಮೋದಿಗೂ ಆಹ್ವಾನ ನೀಡಲಾಗಿದೆ.ಫ್ಯಾಶನ್ ಡಿಸೈನರ್ ಅವಿವಾ ಬಿಡಪ್ಪಾರನ್ನು ಅಭಿ ಮದುವೆಯಾಗುತ್ತಿದ್ದಾರೆ. ಇದಕ್ಕಾಗಿ ಅಂಬಿ ಮನೆಯಲ್ಲಿ ಇಂದಿನಿಂದಲೇ ವಿವಾಹ ಪೂರ್ವ ಕಾರ್ಯಕ್ರಮಗಳು ಆರಂಭವಾಗಿದೆ. ಮದುವೆಗಾಗಿ ಅಂಬಿ ಮನೆಯನ್ನು ವಿದ್ಯುತ್ ದೀಪಗಳಿಂದ