ಬಾಲಿವುಡ್ ನಟಿ ಪಾಯಲ್ ಘೋಷ್ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ನಟಿ ಪಾಯಲ್ ಘೋಷ್ ಅವರು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಧ್ಯಕ್ಷ ರಾಮದಾಸ್ ಅಥಾವಾಲೆ ಅವರನ್ನು ಭೇಟಿಯಾಗಿದ್ದಾರೆ.ಭೇಟಿ ಬಳಿಕ ನ್ಯಾಯ ಪಡೆಯುವ ಹೋರಾಟದಲ್ಲಿ ಆರ್ಪಿಐ ಯಾವಾಗಲೂ ನಿಮ್ಮನ್ನು ಬೆಂಬಲಿಸುತ್ತದೆ! ನಾವು ಯಾವಾಗಲೂ ನಿಮ್ಮೊಂದಿಗಿದ್ದೇವೆ! ಎಂದು ಅಥಾವಲೆ ಟ್ವಿಟ್ ಮಾಡಿದ್ದಾರೆ.ಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ವಿರುದ್ಧ ಕಿರುಕುಳ ನಡೆಸಿದ ಆರೋಪ ಮಾಡಿ ನಟಿ ಕೇಸ್ ದಾಖಲು ಮಾಡಿದ್ದಾರೆ.