Widgets Magazine

ಹೊಸ ಸಿನಿಮಾದೊಂದಿಗೆ ಬಂದ ಮಾಸ್ಟರ್ ಆನಂದ್

ಬೆಂಗಳೂರು| Krishnaveni K| Last Modified ಶುಕ್ರವಾರ, 29 ನವೆಂಬರ್ 2019 (09:20 IST)
ಬೆಂಗಳೂರು: ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಮಾಸ್ಟರ್ ಆನಂದ್ ಸದ್ದಿಲ್ಲದೇ ಒಂದು ಸಿನಿಮಾ ಮುಗಿಸಿ ಅದು ಬಿಡುಗಡೆಯಾಗುವ ಹಂತದಲ್ಲಿದೆ.

 
ಅಮೃತವರ್ಷಿಣಿ, ಹಾಲಿವುಡ್, ಅಭಿ ಮುಂತಾದ ಹಿಟ್ ಸಿನಿಮಾಗಳನ್ನು ನೀಡಿದ ನಿರ್ದೇಶಕ ದಿನೇಶ್ ಬಾಬು ನಿರ್ದೇಶನದಲ್ಲಿ ಮಾಸ್ಟರ್ ಆನಂದ್ ನಾಯಕರಾಗಿ ನಟಿಸಿರುವ ಸಿನಿಮಾ ‘ಹಗಲುಗನಸು’. ಇದು ಡಿಸೆಂಬರ್ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
 
ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನ್ ಮೆಂಟ್ ಸಿನಿಮಾವಾಗಿದ್ದು, ಆನಂದ್ ಗೆ ಜೋಡಿಯಾಗಿ ಸನಿಹಾ ಯಾದವ್ ನಟಿಸಿದ್ದಾರೆ.




ಇದರಲ್ಲಿ ಇನ್ನಷ್ಟು ಓದಿ :