ಬೆಂಗಳೂರು: ನಟಿ ಮಯೂರಿ ಕ್ಯಾತಿ ಮದುವೆಯಾದ ವಿಚಾರವನ್ನು ನಟ ಜೆಕೆ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದೇ ತಡ. ಅವರಿಗೆ ಅಭಿಮಾನಿಗಳು ನೀವೇ ಅವರನ್ನು ಮದುವೆ ಆಗಬೇಕಿತ್ತು ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.ಜೆಕೆ-ಅಶ್ವಿನಿ (ಮಯೂರಿ) ಜೋಡಿ ಅಶ್ವಿನಿ ನಕ್ಷತ್ರ ಧಾರವಾಹಿಯಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಈ ಧಾರವಾಹಿಯಲ್ಲಿ ಜೆಕೆ ತನ್ನ ಪತ್ನಿಯನ್ನು ಅಂದರೆ ಅಶ್ವಿನಿ ಪಾತ್ರಧಾರಿ ಮಯೂರಿಯನ್ನು ಹೆಂಡ್ತಿ ಎಂದು ಕರೆಯುತ್ತಿದ್ದುದು ಜನಪ್ರಿಯವಾಗಿತ್ತು.ಧಾರವಾಹಿಯ ಹೊರತಾಗಿಯೂ ಇಬ್ಬರೂ ಒಳ್ಳೆ ಜೋಡಿ ಮದುವೆಯಾಗಿ ಎಂದೆಲ್ಲಾ ಅಭಿಮಾನಿಗಳು ಹೇಳುತ್ತಲೇ