ಚೆನ್ನೈ: ಮೊನ್ನೆಯಷ್ಟೇ ಪತಿ ವಿದ್ಯಾಸಾಗರ್ ಅನಾರೋಗ್ಯದಿಂದ ನಿಧನರಾದ ದುಃಖದಲ್ಲಿರುವ ನಟಿ ಮೀನಾ ಈಗ ಸೋಷಿಯಲ್ ಮೀಡಿಯಾದಲ್ಲಿ ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ.ವಿದ್ಯಾಸಾಗರ್ ಅಕಾಲಿಕ ಸಾವಿಗೆ ಕಾರಣಗಳ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ಇದರ ಬೆನ್ನಲ್ಲೇ ನಟಿ ಖುಷ್ಬೂ ತಪ್ಪು ಮಾಹಿತಿ ಹಾಕಬೇಡಿ ಎಂದು ಮನವಿ ಮಾಡಿದ್ದರು. ವಿದ್ಯಾಸಾಗರ್ ಸಾವಿಗೆ ಕೊರೋನಾ ಕಾರಣವಲ್ಲ, ಶ್ವಾಸಕೋಶದ ಸೋಂಕು ಆಗಿತ್ತು ಎಂದಿದ್ದರು.ಇದೀಗ ಮೀನಾ ಕೂಡಾ ಇದೇ ರೀತಿ ಮನವಿ ಮಾಡಿದ್ದಾರೆ. ನಾನು ನನ್ನ ಗಂಡನನ್ನು ಕಳೆದುಕೊಂಡ