Widgets Magazine

ಮೀನಾ ಬಜಾರ್ ಸಿನಿಮಾ ಟ್ರೇಲರ್ ರಿಲೀಸ್..!

meena bazar
ಬೆಂಗಳೂರು| rajesh patil| Last Modified ಶುಕ್ರವಾರ, 14 ಫೆಬ್ರವರಿ 2020 (18:26 IST)
ಮೀನಾ ಬಜಾರ್ ಸಿನಿಮಾ ಸೆಟ್ಟೇರಿದಾಗಿನಿಂದ ನಾನ ಕಾರಣಗಳಿಂದ ಸುದ್ದಿಯಾಗುತ್ತಲೇ ಇದೆ. ಪೋಸ್ಟರ್ ರಿಲೀಸ್ ಆದಾಗಲೂ ಸಾಕಷ್ಟು ಗೊಂದಲವನ್ನು ಹುಟ್ಟು ಹಾಕಿತ್ತು. ಟೈಟಲ್ ನಿಂದ ಕೂಡ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟು ಹಾಕಿದ್ದ ಸಿನಿಮಾ 'ಮೀನಾ ಬಜಾರ್'. ಕ್ಯೂರಿಯಾಸಿಟಿ ಜೊಯೆಗೆ ಒಂದಷ್ಟು ಪ್ರಶ್ನೆಗಳನ್ನು ಹಾಗೆಯೇ ಉಳಿಸಿತ್ತು. WWW.ಮೀನಾ ಬಜಾರ್.ಕಾಮ. ಕೊನೆಯಲ್ಲಿ ಬರುವ ಕಾಮದ ಬಗ್ಗೆ ಸಿನಿಮಾದಲ್ಲಿ ಹೈಲೈಟ್ ಮಾಡಲಾಗಿದ್ಯ, ಯಾವ ರೀತಿ ಎಂಬೆಲ್ಲಾ ಪ್ರಶ್ನೆಗಳಿಗೆ ಸಿ‌ನಿಮಾದ ಟ್ರೇಲರ್ ಉತ್ತರ ನೀಡಿದೆ. ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಸಖತ್ ವ್ಯೂವ್ಸ್ ಪಡೆಯುತ್ತಿದೆ.
ರಿಲೀಸ್ ಆಗಿರುವ ಟ್ರೇಲರ್ ಮತ್ತಷ್ಟು ಪ್ರಶ್ನೆಗಳನ್ನ ಹುಟ್ಟು ಹಾಕುವುದರ ಜೊತೆಗೆ ಸಿನಿಮಾ ನೋಡಬೇಕೆಂಬ ಕ್ಯೂರಿಯಾಸಿಟಿಯನ್ನು ಹೆಚ್ಚಿಸಿದೆ. 'ಮೀನಾ ಬಜಾರ್' ಕೇವಲ ಸಿನಿಮಾ ಅಲ್ಲ. ಅದರೊಳಗೊಂದು ಸಿನಿಮಾ ಮಾಡಲಾಗಿದೆ. ಆ ಸಿನಿಮಾದಲ್ಲಿ ಪ್ರಪಂಚದ ಆಗುಹೋಗುಗಳನ್ನ ತೋರಿಸಲಾಗಿದೆ. ಮನುಷ್ಯ ಆಸೆ ಪಡುವ, ಯಾವಾಗಲೂ ಹಾತೊರೆಯುವ ಹೆಂಡ, ಹಣ, ಹೆಣ್ಣಿನ ಸುತ್ತ ಸಿನಿಮಾದೊಳಗಿನ ಕಥೆ ಸುತ್ತುತ್ತೆ.
meena bazar

ಆದ್ರೆ 'ಮೀನಾ ಬಜಾರ್' ಸಿನಿಮಾದಲ್ಲಿ ಕಾಮದ ದಾಹ ತೀರಿಸುವ ಕಥೆ, ರೌಡಿಸಂ ಕೂಡ ಅಡಗಿದೆ. ಹೀಗಾಗಿ ಕಾಮದ ಕಥೆ ಹೇಳುವ ನಿರ್ದೇಶಕನಿಗೂ ರೌಡಿಸಂ ಮಾಡುವವರಿಗೂ ಯಾವ ರೀತಿಯ ನಂಟಿರಬಹುದೆಂಬ ಹಲವು ಪ್ರಶ್ನೆಗಳು ಇಲ್ಲಿ ಹುಟ್ಟಿಕೊಳ್ಳುತ್ತವೆ. ಭೂಮಿ ಮೇಲೆ ಡಿಮ್ಯಾಂಡ್ ಇರುವ ವಿಚಾರಗಳನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಪೋಸ್ಟರ್, ಟೀಸರ್, ಹಾಡುಗಳು ಸೃಷ್ಠಿಸಿದ್ದ ಕುತೂಹಲಕ್ಕಿಂತ ಟ್ರೇಲರ್ ಮತ್ತಷ್ಟು ಕುತೂಹಲದ ಜೊತೆಗೆ ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು, ಕಾಯುವಂತೆ ಮಾಡಿದೆ.
meena bazar
ಈ ಚಿತ್ರಕ್ಕೆ ನಾಗೇಂದ್ರ ಸಿಂಗ್ ಸಿ.ಎನ್. ಬಂಡವಾಳ ಹೂಡಿದ್ದಾರೆ. ಉಳಿದಂತೆ ಮ್ಯಾಥ್ಯೂ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕದ್ರಿ ಮಣಿಕಾಂತ್ ಸಂಗೀತ ಚಿತ್ರಕ್ಕಿದೆ. ರಾಣಾ ಸುನೀಲ್ ಕುಮಾರ್ ಸಿಂಗ್, ರಾಜೇಶ್ ನಟರಂಗ, ವೈಭವಿ ಜೋಶಿ, ಶ್ರೀಜಿತ ಘೋಷ್, ಮಧುಸೂದನ್ ಸೇರಿದಂತೆ ಅನೇಕರು ತಾರಾಗಣದಲ್ಲಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :