ಟಾಲಿವುಡ್ನಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮೆಗಾಸ್ಟಾರ್ ಚಿರಂಜೀವಿ ಈಗ ಮತ್ತೆ ನಂಬರ್ ಒನ್ ಪಟ್ಟಕ್ಕೇರಿದ್ದಾರೆ. ಸರಿಸುಮಾರು ಒಂಬತ್ತು ವರ್ಷಗಳ ಬಳಿಕ ಎಂಟ್ರಿ ಕೊಟ್ಟರೂ ಬಕ್ಸಾಫೀಸ್ ಮೇಲೆ ತಮ್ಮ ಅಧಿಪತ್ಯವನ್ನು ಮುಂದುವರೆಸಿದ್ದಾರೆ. ಖೈದಿ ನಂಬರ್ 150 ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವ ಮೆಗಾಸ್ಟಾರ್ ಈಗ ಕಲೆಕ್ಷನ್ನಲ್ಲಿ ನೂರು ಕೋಟಿ ಕ್ಲಬ್ ಸೇರಿದ್ದಾರೆ. ಈ ತಲೆಮಾರಿನ ನಟರು ಎದುರು ನೋಡುತ್ತಿರುವ ನೂರು ಕೋಟಿ ಕ್ಲಬ್ಗೆ ಮೆಗಾ ಸ್ಟಾರ್ ಸುಲಭವಾಗಿ ಪ್ರವೇಶಿಸಿದ್ದಾರೆ.