ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಮನೆಯಲ್ಲಿ ಮಗುವೊಂದನ್ನು ತೊಡೆಯ ಮೇಲಿರಿಸಿಕೊಂಡು ತಮ್ಮ ಪೊಗರು ಸಿನಿಮಾದ ಹಾಡು ವೀಕ್ಷಿಸುವ ದೃಶ್ಯವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಈ ಮಗು ಚಿರಂಜೀವಿ ಸರ್ಜಾರದ್ದು ಎಂದು ಸುದ್ದಿಯಾಗಿತ್ತು. ಆದರೆ ಇದಕ್ಕೀಗ ಸ್ವತಃ ಧ್ರುವ ಅತ್ತಿಗೆ ಮೇಘನಾ ಸರ್ಜಾ ಸ್ಪಷ್ಟನೆ ನೀಡಿದ್ದಾರೆ. ಧ್ರುವ ಜೊತೆಗೆ ಅವರ ತಾಯಿಯೂ ವಿಡಿಯೋದಲ್ಲಿದ್ದರು. ಇದನ್ನು ನೋಡಿ ಅಣ್ಣನ ಮಗನ ಜೊತೆ ಧ್ರುವ ಪೊಗರು ಹಾಡು ವೀಕ್ಷಿಸುತ್ತಿದ್ದಾರೆ ಎಂದು