ಬೆಂಗಳೂರು: ನಟಿ ಮೇಘನಾ ಸರ್ಜಾ ಇತ್ತೀಚೆಗೆ ಕೊರೋನಾ ಭಯದಿಂದ ಹೋಂ ಕ್ವಾರಂಟೈನ್ ಗೊಳಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.ಕಳೆದ ಡಿಸೆಂಬರ್ ನಲ್ಲಿ ಮೇಘನಾ ತಂದೆ, ನಟ ಸುಂದರ್ ರಾಜ್ ಮತ್ತು ತಾಯಿ ಪ್ರಮೀಳಾ ಜೋಷಾಯ್ ಕೊರೋನಾ ಸೋಂಕಿತರಾಗಿದ್ದರು. ಜೊತೆಗೆ ಸ್ವತಃ ತಾವೇ ಕೊರೋನಾ ಅಪಾಯಕ್ಕೊಳಗಾಗಿದ್ದರು. ಈ ಅನುಭವಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಜನರು ಸುರಕ್ಷಿತವಾಗಿರುವಂತೆ ಮನವಿ ಮಾಡಿದ್ದಾರೆ.‘ಇತ್ತೀಚೆಗೆ ನಾನೂ ಕೊರೋನಾ ಅಪಾಯಕ್ಕೊಳಗಾಗಿದ್ದೆ. ಪುಟ್ಟ ಮಗು, ವಯಸ್ಸಾದ ತಂದೆ-ತಾಯಿ ಇದ್ದಿದ್ದರಿಂದ ಕೆಲವು ದಿನಗಳ