ಶೂಟಿಂಗ್ ನಲ್ಲಿ ಭಾಗಿಯಾದ ಮೇಘನಾ ಸರ್ಜಾ: ಆದ್ರೆ ಇದು ಸಿನಿಮಾ ಅಲ್ಲ!

ಬೆಂಗಳೂರು| Krishnaveni K| Last Modified ಶನಿವಾರ, 24 ಜುಲೈ 2021 (10:05 IST)
ಬೆಂಗಳೂರು: ನಟಿ ಮೇಘನಾ ಸರ್ಜಾ ಪತಿಯ ಅಗಲುವಿಕೆಯ ನಂತರ ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ಬಂದಿದ್ದಾರೆ.
 > ಚಿರು ಸರ್ಜಾ ಸಾವಿನ ಬಳಿಕ, ಜ್ಯೂನಿಯರ್ ಚಿರುವಿಗೆ ತಾಯಿಯಾದ ಬಳಿಕ ಮೇಘನಾ ನಟನೆಯಿಂದ ದೂರವೇ ಉಳಿದಿದ್ದರು. ಆದರೆ ಜ್ಯೂನಿಯರ್ ಚಿರುಗೆ 9 ತಿಂಗಳು ತುಂಬಿದ ದಿನ ಕ್ಯಾಮರಾ ಎದುರಿಸಿರುವ ವಿಚಾರವನ್ನು ಹೇಳಿಕೊಂಡಿದ್ದರು.>   ಇದರಿಂದಾಗಿ ಮೇಘನಾ ಮತ್ತೆ ಸಿನಿಮಾಗೆ ಬರುತ್ತಾರೆ ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ. ಆದರೆ ಮೇಘನಾ ಈಗ ಶೂಟಿಂಗ್ ಮಾಡಿರುವುದು ಸಿನಿಮಾಗೆ ಅಲ್ಲ, ಬದಲಾಗಿ ಜಾಹೀರಾತಿನ ಚಿತ್ರೀಕರಣಕ್ಕೆ. ಆದರೆ ಮುಂದೊಂದು ದಿನ ಖಂಡಿತಾ ಸಿನಿಮಾಗೆ ಮರಳುವುದು ಖಂಡಿತಾ ಎಂದು ಖಾತ್ರಿಯಾಗಿದೆ.ಇದರಲ್ಲಿ ಇನ್ನಷ್ಟು ಓದಿ :