ಸಚಿವ ಸಿಎಸ್ ಪುಟ್ಟರಾಜುಗೆ ನಿಖಿಲ್ ಎಲ್ಲಿದ್ದೀಯಪ್ಪಾ ಪಿಕ್ಚರ್ ಮಾಡುವಾಸೆಯಂತೆ!

ಬೆಂಗಳೂರು, ಸೋಮವಾರ, 13 ಮೇ 2019 (07:26 IST)

ಬೆಂಗಳೂರು: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಸೋಷಿಯಲ್ ಮೀಡಿಯಾದಲ್ಲಿ ಅತೀ ಹೆಚ್ಚು ಟ್ರೋಲ್ ಗೊಳಗಾಗಿದ್ದರು.


 
ಅದರಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಕುಮಾರಸ್ವಾಮಿ ಮಾತನ್ನೇ ಆಧಾರವಾಗಿಟ್ಟುಕೊಂಡು ಹಿಗ್ಗಾ ಮುಗ್ಗಾ ಟ್ರೋಲ್ ಮಾಡಲಾಗಿತ್ತು. ಇದು ಎಷ್ಟು ಜನಪ್ರಿಯವಾಗಿತ್ತೆಂದರೆ ಹಲವು ನಿರ್ಮಾಪಕರು ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲೂ ತುದಿಗಾಲಲ್ಲಿ  ನಿಂತಿದ್ದರು.
 
ಇದೀಗ ಇಂತಹದ್ದೇ ಬಯಕೆ ತನಗೂ ಇತ್ತು ಎಂದು ಸಿಎಂಗೆ ಆಪ್ತರೂ ಆಗಿರುವ ಸಚಿವ ಸಿಎಸ್ ಪುಟ್ಟರಾಜು ಹೇಳಿಕೊಂಡಿದ್ದಾರೆ. ಈ ಟೈಟಲ್ ಇಟ್ಟುಕೊಂಡು ನಿಖಿಲ್ ರನ್ನೇ ನಾಯಕರಾಗಿ ಸಿನಿಮಾ ಮಾಡಬೇಕು. ನಂತರ ಟ್ರೋಲ್ ಗಳು ಯಾವುದೂ ನಿಖಿಲ್ ರನ್ನು ಕುಗ್ಗಿಸದು ಎಂದು ತೋರಿಸಬೇಕಿತ್ತು ಎಂದು ಪುಟ್ಟರಾಜು ಹೇಳಿಕೊಂಡಿದ್ದಾರೆ. ಆ ಆಸೆ ನೆರವೇರುತ್ತದೋ ಎಂದು ಕಾದು ನೋಡಬೇಕಷ್ಟೇ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕೆಜಿಎಫ್ 2 ನಲ್ಲಿ ರಾಕಿಂಗ್ ಸ್ಟಾರ್ ಯಶ್ ಲುಕ್ ಹೀಗಿರಲಿದೆ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾದಲ್ಲೂ ಯಶ್ ದಾಡಿ ಬಿಟ್ಟುಕೊಂಡಿರುತ್ತಾರಾ? ...

news

ರತ್ನಮಂಜರಿಯಲ್ಲಿದೆಯಾ ಹಾರರ್ ವೃತ್ತಾಂತ?

ಶೀರ್ಷಿಕೆಯ ಮೂಲಕವೇ ಸೆಳೆಯೋ ಒಂದಷ್ಟು ಸಿನಿಮಾಗಳು ಸಾಲು ಸಾಲಾಗಿ ಬರುತ್ತಿವೆ. ದಶಕಗಳಷ್ಟು ಹಿಂದೆ ತೆರೆ ...

news

ರತ್ನಮಂಜರಿಯಲ್ಲಿ ಕೊನೇ ಸಲ ಕಾಣಿಸಿಕೊಂಡಿದೆ ತಲಕಾವೇರಿ!

ರಾಜ್ ಚರಣ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ರತ್ನಮಂಜರಿ. ಪ್ರಸಿದ್ಧ್ ನಿರ್ದೇಶನದ ಈ ಚಿತ್ರ ಇದೇ ...

news

ರತ್ನಮಂಜರಿ: ಕೊಡಗಿನ ನಿಜವಾದ ಸೌಂದರ್ಯ ಸೆರೆಯಾಗಿದೆ ಇಲ್ಲಿ!

ಪ್ರಸಿದ್ಧ ನಿರ್ದೇಶನದ ರತ್ನಮಂಜರಿ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ ಹದಿನೇಳನೇ ತಾರೀಕಿನಂದು ...