Photo Courtesy: Twitterಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದ ಧ್ರುವ ಸರ್ಜಾ ನಾಯಕರಾಗಿರುವ ಸಿನಿಮಾ ಬಗ್ಗೆ ಈಗ ಪ್ರೇಕ್ಷಕರಿಗೆ ಕುತೂಹಲ ಹೆಚ್ಚಾಗಿದೆ. ಇದಕ್ಕೆ ಕಾರಣವೂ ಇದೆ.ಪ್ರೇಮ್ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ರನ್ನು ಭೇಟಿ ಮಾಡಿ ಬಂದಿದ್ದಾರೆ. ಹೀಗಾಗಿ ಕೆವಿಎನ್-4 ಸಿನಿಮಾಗೆ ಮೋಹನ್ ಲಾಲ್ ಸಾಥ್ ಕೊಡಲಿರುವುದು ಪಕ್ಕಾ ಆಗಿದೆ.ಈ ಸಿನಿಮಾದ ಟೈಟಲ್ ಇನ್ನೂ ಘೋಷಣೆಯಾಗಿಲ್ಲ. ಈ ಚಿತ್ರವನ್ನು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಮಾಡಲು ಪ್ರೇಮ್ ತಯಾರಿ ನಡೆಸಿದ್ದಾರೆ.