ರಿಲೀಸ್ ಆಯ್ತು ‘ಮೋಕ್ಷ’ ದ ಟೀಸರ್…!ಸಖತ್ ಆಗಿದೆ ‘ಮೋಕ್ಷ’ ದ ಟೀಸರ್…!

moksha
ಬೆಂಗಳೂರು| rajesh patil| Last Modified ಗುರುವಾರ, 26 ಡಿಸೆಂಬರ್ 2019 (13:58 IST)
ಚಂದನವನದಲ್ಲಿ ಈಗಂತೂ ಭಿನ್ನ-ವಿಭಿನ್ನ ಟೈಟಲ್ ನ, ಕಥಾಹಂದರದ ಸಿನೆಮಾಗಳು ತೆರೆಗೆ ಬರ್ತಿವೆ. ಇವುಗಳ ನಡುವೆ ‘ಮೋಕ್ಷ’ ಎಂಬ ಕ್ಯೂರಿಯಸ್ ಟೈಟಲ್ ನ ಚಿತ್ರ ತಯಾರಾಗ್ತಿದ್ದು ಚಿತ್ರದ ಟೀಸರ್ ರಿಲೀಸ್ ಆಗಿದೆ.ಬಹುತೇಕ ಹೊಸಬರೇ ಇರೋ ಈ ಚಿತ್ರದ ಟೀಸರ್ ನೋಡಿದಾಕ್ಷಣ ಇಲ್ಲೇನೋ ಹೊಸತನದವಿರೋದು ಗಮನಸೆಳೆಯುತ್ತೆ. ಖಳನಟ ರವಿಶಂಕರ್ ಅವರ  ಹಿನ್ನಲೆ ಧ್ವನಿಯಿರೋ ಈ ಟೀಸರ್ ನ ಒಮ್ಮೆ ನೋಡಿದ್ರೆ ಮೈ ಜುಮ್ಮೆನಿಸೋದು ಖಂಡಿತ.
ಟೀಸರ್ ನೋಡಿದಾಕ್ಷಣ ಗೊತ್ತಾಗೋದು ಕಥಯೇ ಚಿತ್ರದ ಹೀರೋ ಅಂತ. ಸಮರ್ಥ್ ನಾಯಕ್ ನಿರ್ದೇಶಿಸಿರೋ ಈ ಚಿತ್ರಕ್ಕೆ ಮೋಹನ್ ಧನ್ ರಾಜ್ ನಾಯಕರಾದ್ರೆ,ಆರಾಧ್ಯ ಲಕ್ಷ್ಮಣ್ ನಾಯಕಿ. ಗುರುಪ್ರಶಾಂತ್ ರೈ,ಜೋನ್ ಜೋಸೆಫ್ ಹಾಗೂ ಕಿರಣ್ ಹಂಪಾಪುರ  ಛಾಯಾಗ್ರಹಣವಿರೋ ‘ಮೋಕ್ಷ’ ವನ್ನ ಬೆಂಗಳೂರು,ಹಾಸನ,ಕಾರವಾರ,ಗೋವಾ,ಹಾಗೂ ಗೋಕಾಕ್ ಸುತ್ತ-ಮುತ್ತ ಸುಂದರವಾಗಿ ಚಿತ್ರಿಸಲಾಗಿದೆ.
 
ಹೈಲೇಟ್ ಅನಿಸೋ ಮ್ಯೂಸಿಕ್ ಗೆ ಕಿಶನ್ ಮೋಹನ್ ಮತ್ತು ಸಚಿನ್ ಬಾಲು ಹಾಡಿದ್ದು, ಜಯಂತ್ ಕಾಯ್ಕಿಣಿ ಮತ್ತು ಕುಮಾರ್ ದತ್ ಸಾಹಿತ್ಯವಿದ್ದು, ತಾರಕ್  ಪೊನ್ನಪ್ಪ ಭೂಮಿ,ಪ್ರಶಾಂತ್ ಹಲವರು ತೆರೆಹಂಚಿಕೊಂಡಿದ್ದಾರೆ.ಸಧ್ಯದಲ್ಲೇ ಸಿನೆಮಾ ತೆರೆಗೆ ತರೋ ಪ್ಲಾನ್ ನಡಿತಿದ್ದು, ಇನ್ನೇನಿದ್ರು “ಮೋಕ್ಷ” ದ ಔಟ್ ಪಟ್ ಹೇಗಿರತ್ತೆ ಅನ್ನೋದೆ ಕುತೂಹಲ.


ಇದರಲ್ಲಿ ಇನ್ನಷ್ಟು ಓದಿ :