ಹೈದರಾಬಾದ್: ತೆಲುಗು ಸೂಪರ್ ಸ್ಟಾರ್ ತಮ್ಮ ಜತೆ ಸೆಲ್ಫೀ ತೆಗೆಯಲು ಬಂದ ಅಭಿಮಾನಿಗೆ ಕಪೋಳ ಮೋಕ್ಷ ಮಾಡಿದ್ದಾರೆ. ಮುಂಬರುವ ಉಪಚುನಾವಣೆಗೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಬಾಲಕೃಷ್ಣ ಬಳಿ ಅಭಿಮಾನಿಯೊಬ್ಬ ಸೆಲ್ಫೀ ತೆಗೆಯುವ ಆಸೆಯಿಂದ ಸನಿಹ ಬಂದಿದ್ದ.ಇದರಿಂದ ಕೆರಳಿದ ಬಾಲಕೃಷ್ಣ ಅಭಿಮಾನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಈ ವಿಡಿಯೋ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಹಿಂದೊಮ್ಮೆ ಇದೇ ರೀತಿ ತಿರುಪತಿಗೆ ಭೇಟಿ ನೀಡಿದ್ದಾಗ ಸೆಲ್ಫೀ ತೆಗೆಯಲು ಬಂದಿದ್ದ ಅಭಿಮಾನಿಗೆ ಬಾಲಕೃಷ್ಣ ಕಪಾಳಕ್ಕೆ ಹೊಡೆದಿದ್ದರು.