ಹೈದರಾಬಾದ್: ಸಮಂತಾ ಋತು ಪ್ರಭು ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ನಿಜ ಕಾರಣವೆನೆಂಬುದನ್ನು ನಾಗಚೈತನ್ಯ ಕೊನೆಗೂ ಬಹಿರಂಗಪಡಿಸಿದ್ದಾರೆ.ಟಾಲಿವುಡ್ ನ ರಿಯಲ್ ಜೋಡಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದಾಗ ಅಭಿಮಾನಿಗಳಿಗೂ ತೀವ್ರ ಬೇಸರವಾಗಿತ್ತು. ಆದರೆ ವಿಚ್ಛೇದನಕ್ಕೆ ನಿಜ ಕಾರಣವೇನೆಂಬುದನ್ನು ಇದುವರೆಗೆ ಇಬ್ಬರೂ ಎಲ್ಲೂ ಬಹಿರಂಗಪಡಿಸಿರಲಿಲ್ಲ.ಆದರೆ ಇದೀಗ ಸಂದರ್ಶನವೊಂದರಲ್ಲಿ ನಾಗಚೈತನ್ಯ ತಾವಾಗಿಯೇ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಮಾಧ್ಯಮಗಳಲ್ಲಿ ಬರುತ್ತಿದ್ದ ಗಾಸಿಪ್ ಗಳೇ ನಮ್ಮ ವಿಚ್ಛೇದನಕ್ಕೆ ಕಾರಣವಾಯಿತು. ಮೊದ ಮೊದಲು ನಾವು ಗಾಸಿಪ್