ಸಮಂತಾ-ನಾಗಚೈತನ್ಯ ದಾಂಪತ್ಯ ಸರಿಪಡಿಸಲು ಮುಂದಾದ ನಾಗಾರ್ಜುನ

ಹೈದರಾಬಾದ್| Krishnaveni K| Last Modified ಸೋಮವಾರ, 13 ಸೆಪ್ಟಂಬರ್ 2021 (17:01 IST)
ಹೈದರಾಬಾದ್: ಟಾಲಿವುಡ್ ನ ಮೋಸ್ಟ್ ವಾಂಟೆಡ್ ಜೋಡಿ ಎನಿಸಿಕೊಂಡಿದ್ದ ಸಮಂತಾ ಪ್ರಭು ಮತ್ತು ನಡುವಿನ ವೈವಾಹಿಕ ಬದುಕು ಮುರಿದುಬಿದ್ದಿದೆ ಎಂಬ ಸುದ್ದಿ ಹರಡಿದೆ. ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎನ್ನುವುದಂತೂ ಸ್ಪಷ್ಟವಾಗಿದೆ.

 
2017 ರಲ್ಲಿ ಪ್ರೀತಿಸಿದ ಮದುವೆಯಾದ ಈ ಜೋಡಿಯನ್ನು ಒಂದುಗೂಡಿಸಲು ಈಗ ನಾಗಚೈತನ್ಯ ತಂದೆ, ನಟ ಇನ್ನಿಲ್ಲದ ಪ್ರಯತ್ನಪಡುತ್ತಿದ್ದಾರಂತೆ.
 
ಇಬ್ಬರ ನಡುವೆ ಸಮಸ್ಯೆಯೇನೆಂದು ತಿಳಿದುಕೊಂಡು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾಗಾರ್ಜುನ್ ಪ್ರಯತ್ನ ನಡೆಸಿದ್ದಾರಂತೆ. ಆದರೆ ಇಬ್ಬರೂ ಎಲ್ಲೂ ಅಧಿಕೃತವಾಗಿ ತಾವು ಬೇರೆಯಾಗುತ್ತಿರುವ ಸುದ್ದಿಯನ್ನು ಹೇಳಿಕೊಂಡಿಲ್ಲ. ಹಾಗಿದ್ದರೂ ಇತ್ತೀಚೆಗೆ ಸಮಂತಾ ಸೋಷಿಯಲ್ ಮೀಡಿಯಾಗಳಲ್ಲಿ ತಮ್ಮ ಹೆಸರಿನ ಮುಂದಿದ್ದ ಅಕ್ಕಿನೇನಿ ಹೆಸರನ್ನು ಕೈ ಬಿಟ್ಟಿದ್ದು ಊಹಾಪೋಹಗಳಿಗೆ ಕಾರಣವಾಗಿತ್ತು.




ಇದರಲ್ಲಿ ಇನ್ನಷ್ಟು ಓದಿ :