ಬೆಂಗಳೂರು: ಗೊರೂರರ ಸುಪ್ರಸಿದ್ಧ ಕೃತಿ ‘ನಮ್ಮೂರ ರಸಿಕರು’ ವೆಬ್ ಸರಣಿ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಕಟ್ಟೆ ಆಪ್ ಎಂಬ ಹೊಸದಾಗಿ ಲಾಂಚ್ ಆಗುತ್ತಿರುವ ಆಪ್ ನಲ್ಲಿ ನಮ್ಮೂರ ರಸಿಕರು ವೆಬ್ ಸರಣಿ ರೂಪದಲ್ಲಿ ಬಿಡುಗಡೆಯಾಗುತ್ತಿದೆ. ‘ನಮ್ಮೂರ ರಸಿಕರು’ ನಾಟಕ, ಪುಸ್ತಕ ರೂಪದಲ್ಲಿ ಓದಿರುತ್ತೀರಿ. ಆದರೆ ವೆಬ್ ಸರಣಿ ರೂಪದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲು. ಈ ವೆಬ್ ಸರಣಿಯನ್ನು ನಿರ್ದೇಶಿಸಿರುವುದು ನಂದಿತಾ ಯಾದವ್ ಎಂಬ ಪ್ರತಿಭಾವಂತ ನಿರ್ದೇಶಕಿ. ಅಶೋಕ್