Photo Courtesy: Twitterಹೈದರಾಬಾದ್: ಮಾಸ್ ಸಿನಿಮಾಗಳ ರಾಜ ನಂದಮೂರಿ ಬಾಲಕೃಷ್ಣ ಅಲಿಯಾಸ್ ಅಭಿಮಾನಿಗಳ ಪ್ರೀತಿಯ ಬಾಲಯ್ಯಗೆ ಇಂದು ಜನ್ಮದಿನದ ಸಂಭ್ರಮ.ಬಾಲಯ್ಯಗೆ ಅಭಿಮಾನಿಗಳು, ಸಿನಿ ಸ್ನೇಹಿತರು ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ಶುಭಾಷಯ ಕೋರುತ್ತಿದ್ದಾರೆ. ಅವರಿಗೆ ಈಗ 63 ವರ್ಷ ವಯಸ್ಸು.ಈ ವಯಸ್ಸಿನಲ್ಲೂ ಮಾಸ್ ಸಿನಿಮಾಗಳಲ್ಲಿ ಖಡಕ್ ಪಾತ್ರಗಳನ್ನು ಮಾಡಿ ಮಿಂಚುತ್ತಿರುವ ನಂದಮೂರಿ ಬಾಲಕೃಷ್ಣ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದಾರೆ. ತಮ್ಮದೇ ಪ್ರತ್ಯೇಕ ಅಭಿಮಾನಿ ವರ್ಗದವರನ್ನು ಹೊಂದಿರುವ ಬಾಲಕೃಷ್ಣ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.