ಬೆಂಗಳೂರು: ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆಗಳನ್ನು ಮೊದಲ ದಿನವೇ ಬರೆದ ಸಿನಿಮಾ. ಆದರೆ ಆ ದಾಖಲೆಯನ್ನು ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಮುರಿದಿದೆಯಾ?ಹಾಗೊಂದು ಸುದ್ದಿ ಇದೀಗ ಗಾಂಧಿನಗರದಲ್ಲಿ ಓಡಾಡುತ್ತಿದೆ. ನಟಸಾರ್ವಭೌಮ ನಿನ್ನೆ ರಿಲೀಸ್ ಆಗಿದ್ದು, ಜನರಿಂದ ಅದ್ಭುತ ಪ್ರತಿಕ್ರಿಯೆ ಲಭ್ಯವಾಗಿದೆ. ಈ ಸಿನಿಮಾದ ಒಂದು ದಿನದ ಗಳಿಕೆ ಇದೀಗ ಕೆಜಿಎಫ್ ಸಿನಿಮಾದ ಮೊದಲ ದಿನದ ಗಳಿಕೆಯನ್ನೂ ಮೀರಿಸಿದೆ ಎಂಬ ಸುದ್ದಿ ಓಡಾಡುತ್ತಿದೆ.ಕೆಜಿಎಫ್