Widgets Magazine

ತಮ್ಮ ಸಂಭಾವನೆಯನ್ನು ಹೆಚ್ಚಿಸಿದ ನಯನತಾರಾ

ಚೆನ್ನೈ| pavithra| Last Modified ಶುಕ್ರವಾರ, 20 ನವೆಂಬರ್ 2020 (12:53 IST)
ಚೆನ್ನೈ : ನಟಿ ನಯನತಾರಾ ತಮಿಳಿನ ಸ್ಟಾರ್ ನಟಿಯರಲ್ಲಿ ಒಬ್ಬರು. ಇವರು ಚಿತ್ರರಂಗಕ್ಕೆ ಬಂದು 15 ವರ್ಷಗಳಾಗಿದ್ದು, ಕಠಿಣ ಪರಿಶ್ರಮದಿಂದ ಜನಪ್ರಿಯರಾಗಿದ್ದಾರೆ. ಇದೀಗ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗಿದೆ.

ತಮಿಳು ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ನಯನತಾರಾ ಮೊದಲ ಸ್ಥಾನದಲ್ಲಿದ್ದಾರೆ. ಅವರು ಒಂದು ಚಿತ್ರಕ್ಕೆ 3.5 ಕೋಟಿ ಸಂಭಾವನೆ ಪಡೆಯುತ್ತಾರೆ. ಆದರೆ ಇತ್ತೀಚೆಗೆ ದೀಪಾವಳಿ ಹಬ್ಬದಂದು ನಯನತಾರಾ ಅಭಿನಯದ ‘ಮೂಕುತಿ ಅಮ್ಮನ್’ ಚಿತ್ರ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಿದ್ದು, ಸೂಪರ್ ಹಿಟ್ ಆಗಿದೆ.

‘ಮೂಕುತಿ ಅಮ್ಮನ್’ ಚಿತ್ರದಲ್ಲಿ 3.5 ಕೋಟಿ ಸಂಭಾವನೆ ಪಡೆದಿದ್ದ ನಯನತಾರಾ ಇದೀಗ ಈ ಚಿತ್ರದ ಯಶಸ್ಸಿನ ನಂತರ ತಮ್ಮ ಸಂಭಾವನೆಯನ್ನು ಈಗ 10 ಕೋಟಿಗೆ ಹೆಚ್ಚಿಸಿದ್ದಾರೆ ಎನ್ನಲಾಗಿದೆ.  ಇದರಲ್ಲಿ ಇನ್ನಷ್ಟು ಓದಿ :