ಸಿನಿಮಾರಂಗಕ್ಕೆ ಕರೆತಂದ ನಿರ್ದೇಶಕರ ಚಿತ್ರದಲ್ಲಿ ನಯನತಾರಾ ನಟಿಸುತ್ತಿಲ್ಲ. ಯಾಕೆ ಗೊತ್ತಾ?

ಚೆನ್ನೈ| pavithra| Last Modified ಬುಧವಾರ, 21 ಅಕ್ಟೋಬರ್ 2020 (10:12 IST)
ಚೆನ್ನೈ : ನಟಿ ನಯನತಾರಾ ಪ್ರಸ್ತುತ ತಮಿಳು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿ. ಅವರು ಈಗಲೂ ನಟಿಯಾಗಿದ್ದರೂ ಕೂಡ ನಿರ್ದೇಶಕ ಹರಿ ಚಿತ್ರದಲ್ಲಿ ಮಾತ್ರ ನಟಿಸುತ್ತಿಲ್ಲ.
ನಯನತಾರಾ ಅವರನ್ನು ತಮಿಳು ಚಿತ್ರರಂಗಕ್ಕೆ ನಾಯಕಿಯಾಗಿ ಪರಿಚಯಿಸಿದ್ದು, ನಿರ್ದೇಶಕ ಹರಿ. ನಿರ್ದೇಶಕ ಹರಿ ನಿರ್ದೇಶನದ, ಶರತ್ ಕುಮಾರ್ ಅಭಿನಯದ ‘ಅಯ್ಯ’ ಚಿತ್ರದಲ್ಲಿ ನಟಿಸುವುದರ ಮೂಲಕ ನಯನತಾರಾ ನಟನೆಗೆ ಪಾದಾರ್ಪಣೆ ಮಾಡಿದ್ದರು. ಆದರೆ ಆ ನಂತರ ಹರಿ ಅವರ ಯಾವ ಚಿತ್ರದಲ್ಲಿಯೂ ನಯನತಾರಾ ನಟಿಸಲಿಲ್ಲ.ಇದಕ್ಕೆ ಕಾರಣವೇನೆಂದರೆ  ಅವರಿಬ್ಬರ ನಡುವೆ ನಡೆದ ಸಂಘರ್ಷ.> > ಹೌದು. ‘ಅಯ್ಯ’ ಚಿತ್ರೀಕರಣ ಸಮಯದಲ್ಲಿ ನಿರ್ದೇಶಕ ಹರಿ ಮತ್ತು ನಟಿ ನಯನತಾರಾ ಅವರು ಚಿತ್ರದಲ್ಲಿ ಧರಿಸಿದ್ದ ಉಡುಪಿನ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದಕ್ಕಾಗಿಯೇ ಅಯ್ಯ ಚಿತ್ರದ ನಂತರ ಹರಿ ಚಿತ್ರದಲ್ಲಿ ನಯನತಾರಾ ನಟಿಸಲಿಲ್ಲ ಎನ್ನಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :