ನೀನಾಸಂ ಸತೀಶ್ ಬ್ರಹ್ಮಚಾರಿ ಟ್ರೈಲರ್ ನಾಳೆ ಬಿಡುಗಡೆ

ಬೆಂಗಳೂರು| Krishnaveni K| Last Modified ಭಾನುವಾರ, 3 ನವೆಂಬರ್ 2019 (09:00 IST)
ಬೆಂಗಳೂರು: ನೀನಾಸಂ ಸತೀಶ್ ನಾಯಕರಾಗಿ ನಟಿಸಿರುವ ಬ್ರಹ್ಮಚಾರಿ 100 ಪರ್ಸೆಂಟ್ ವರ್ಜಿನ್ ಸಿನಿಮಾದ ಟ್ರೈಲರ್ ನಾಳೆ ಬಿಡುಗಡೆಯಾಗುತ್ತಿದೆ.

 
ಈ ಸಿನಿಮಾದಲ್ಲಿ ಸತೀಶ್ ಜತೆಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಈಗಾಗಲೇ ಹಿಡ್ಕ ಹಿಡ್ಕ ಸಾಂಗ್ ರಿಲೀಸ್ ಆಗಿ ಹಿಟ್ ಆಗಿದೆ. ಜತೆಗೆ ಇದೊಂದು ಪಕ್ಕಾ ಕಾಮಿಡಿ ಎಂಟರ್ ಟೈನರ್ ಆಗಿದ್ದು ಟೈಟಲೇ ಕುತೂಹಲಕಾರಿಯಾಗಿದೆ.
 
ಈ ಸಿನಿಮಾ ನವಂಬರ್ 15 ರಂದು ಬಿಡುಗಡೆಯಾಗಲಿದೆ. ಚಂದ್ರ ಮೋಹನ್ ನಿರ್ದೇಶಿಸಿರುವ ಸಿನಿಮಾ ಉದಯ್ ಕೆ ಮೆಹ್ತಾ ನಿರ್ಮಾಣದಲ್ಲಿ ಮೂಡಿಬಂದಿದೆ.
ಇದರಲ್ಲಿ ಇನ್ನಷ್ಟು ಓದಿ :