ಪರಿಮಳ ಲಾಡ್ಜ್ ಸಿನಿಮಾ ಟ್ರೈಲರ್ ವಿವಾದದ ಬಗ್ಗೆ ನಟ ನೀನಾಸಂ ಸತೀಶ್ ಸ್ಪಷ್ಟನೆ

ಬೆಂಗಳೂರು| Krishnaveni K| Last Modified ಶನಿವಾರ, 31 ಆಗಸ್ಟ್ 2019 (09:40 IST)
ಬೆಂಗಳೂರು: ವಿಜಯೇಂದ್ರ ಪ್ರಸಾದ್ ನಿರ್ದೇಶನದ ನಟ ನೀನಾಸಂ ಸತೀಶ್ ಹಾಗೂ ಲೂಸ್ ಮಾದ ಯೋಗಿ ಪ್ರಮುಖ ಪಾತ್ರದಲ್ಲಿರುವ ಪರಿಮಳ ಲಾಡ್ಜ್ ಎನ್ನುವ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡಿತ್ತು.

 
ಈ ಸಿನಿಮಾದ ಟ್ರೈಲರ್ ನೋಡಿದವರು ಇದು ಸಲಿಂಗಿಗಳ ಕತೆ ಎಂದು ಅಂದುಕೊಂಡಿದ್ದರು. ಅಷ್ಟಲ್ಲದೆ, ಇಂತಹಾ ಸಿನಿಮಾ ಮಾಡುತ್ತಿರುವುದು ಯಾಕೆ ಎಂದು ಕೆಲವರು ಟೀಕೆ ಮಾಡಿದ್ದರು. ಈ ಟೀಕೆಗಳ ಬೆನ್ನಲ್ಲೇ ನಟ ನೀನಾಸಂ ಸತೀಶ್ ವಿಡಿಯೋ ಸಂದೇಶ ಮೂಲಕ ಸಿನಿಮಾ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
 
ಇದು ಸಲಿಂಗ ಕಾಮಿಗಳ ಕತೆ ಎಂದು ತಪ್ಪಾಗಿ ಪ್ರಚಾರವಾಗುತ್ತಿದೆ. ಇದು ಸೆನ್ಸಿಬಲ್ ಆದ ವ್ಯಕ್ತಿಗಳ ಕತೆ. ಇಲ್ಲಿ ಚೇಷ್ಟೆಗಾಗಿ ಸಲಿಂಗ ಕಾಮಿಗಳು ಎಂದು ಹಾಕಿದ್ದಾರಷ್ಟೇ. ನಿಜವಾಗಿ ಈ ಸಿನಿಮಾದಲ್ಲಿ ಸಲಿಂಗ ಕಾಮಿಗಳ ಬಗ್ಗೆ ಏನೂ ಇಲ್ಲ ಎಂದು ಸತೀಶ್ ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :