ಬೆಂಗಳೂರು: ನಟ ನೀನಾಸಂ ಸತೀಶ್ ಈಗ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಅದರಲ್ಲೂ ಇಂದಿನ ದಿನ ಅವರಿಗೆ ತುಂಬಾ ವಿಶೇಷವಂತೆ. ಕಾರಣ, ಅವರು ಅಭಿನಯಿಸುತ್ತಿರುವ ಮೂರು ಸಿನಿಮಾಗಳ ಚಿತ್ರೀಕರಣ ಇಂದು ಒಂದೇ ದಿನ ಮೂರು ಕಡೆಗಳಲ್ಲಿ ನಡೆಯುತ್ತಿದೆ. ಮ್ಯಾಟ್ನಿ ಮತ್ತು ದಸರಾ ಸಿನಿಮಾದ ನಾನಿಲ್ಲದ ಭಾಗದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಈ ಸೌಭಾಗ್ಯ ದೊರೆಯಲು ನಿಮ್ಮೆಲ್ಲರ ಪ್ರೀತಿ ಕಾರಣ ಎಂದು ನೀನಾಸಂ