ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಫೋಟೋ ನೋಡಿ ಮಿಲನಾಗೆ ಜೋಪಾನ ಎಂದ್ರು ನೆಟ್ಟಿಗರು!

ಬೆಂಗಳೂರು| Krishnaveni K| Last Modified ಗುರುವಾರ, 25 ನವೆಂಬರ್ 2021 (09:00 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ನಾಯ್ಡು ಅಭಿನಯದ ದಿಲ್ ಪಸಂದ್ ಸಿನಿಮಾದ ಫಸ್ಟ್ ಲುಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಫಸ್ಟ್ ಲುಕ್ ಫೋಟೋ ಶೂಟ್ ನ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಕ್ಲೋಸಪ್ ಫೋಟೋಗಳನ್ನು ನೋಡಿದ ನೆಟ್ಟಿಗರು ಲೈಟಾಗಿ ಮಿಲನಾ ನಾಗರಾಜ್ ಕಾಲೆಳೆದಿದ್ದಾರೆ.


ಕೃಷ್ಣ ಪತ್ನಿ ಮಿಲನಾಗೆ ನಿಮ್ಮ ಗಂಡನ ಬಗ್ಗೆ ಜೋಪಾನ ಎಂದಿದ್ದಾರೆ. ಯಾಕೆಂದರೆ ಡಾರ್ಲಿಂಗ್ ಕೃಷ್ಣ-ನಿಶ್ವಿಕಾ ಆ ಮಟ್ಟಿಗೆ ಇಂಟಿಮೇಟ್ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದು ನೋಡಿ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಮನೆಗೆ ಬಂದ ಮೇಲೆ ಕ್ಲಾಸ್ ತಗೊಳ್ಳಿ ಎಂದು ಮಿಲನಾಗೆ ನೆಟ್ಟಿಗರು ತಮಾಷೆ ಮಾಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :