ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿರುವ ನಟ, ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಬಿಜೆಪಿ ಅಭ್ಯರ್ಥಿ ನಿರ್ಮಾಪಕ ಮುನಿರತ್ನ ಬಗ್ಗೆ ಮಾತನಾಡಿದ್ದಾರೆ.ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದಲ್ಲಿ ನಿಖಿಲ್ ಅಭಿಮನ್ಯು ಪಾತ್ರ ಮಾಡಿದ್ದರು. ಹೀಗಾಗಿ ಇಬ್ಬರ ನಡುವಿನ ಸಂಬಂಧದ ಬಗ್ಗೆ ನಿಖಿಲ್ ಮಾತನಾಡಿದ್ದಾರೆ. ನನ್ನ ಮುನಿರತ್ನ ಸಂಬಂಧ ಸಿನಿಮಾಕ್ಕಷ್ಟೇ ಸೀಮಿತ. ಅವರು ನಿರ್ಮಾಪಕ, ನಾನು ನಟ. ಹಾಗಾಗಿ ಅವರ ಸಿನಿಮಾದಲ್ಲಿ ಒಂದು ಪಾತ್ರ ಮಾಡಿದ್ದೆನಷ್ಟೇ.