ಬೆಂಗಳೂರು: ಮಗನ ಮದುವೆಯನ್ನು ಅದ್ಧೂರಿಯಾಗಿ ಮಾಡಬೇಕೆಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಕನಸಿಗೆ ಕೊರೋನಾ ತಣ್ಣೀರೆರಚಿದೆ. ಲಾಕ್ ಡೌನ್ ನಿಂದಾಗಿ ಇಂದು ಸರಳವಾಗಿ ನಿಖಿಲ್ ಕುಮಾರಸ್ವಾಮಿ ಮದುವೆ ಸಮಾರಂಭ ನಡೆಯಲಿದೆ. ಕೇವಲ ಎರಡೂ ಕುಟುಂಬದವರು ಮಾತ್ರ ಹಾಜರಿದ್ದು, ಇಂದು ಬೆಳಿಗ್ಗೆ 10 ಗಂಟೆಯ ಸುಮುಹೂರ್ತದಲ್ಲಿ ನಿಖಿಲ್-ರೇವತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಕೊರೋನಾ ಇರುವುದರಿಂದ ಹೆಚ್ಚು ಜನರನ್ನು ಕರೆದು ಅದ್ಧೂರಿಯಾಗಿ ಮದುವೆ ಮಾಡುವ ಸ್ಥಿತಿಯಲ್ಲಿ ಗೌಡರ ಕುಟುಂಬವಿಲ್ಲ. ಹೀಗಾಗಿ ಈಗ ನಿಗದಿತ ಮುಹೂರ್ತದಲ್ಲಿ ಸರಳವಾಗಿ