ಬೆಂಗಳೂರು: ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಆದರೆ ನಿಖಿಲ್ ಕುಮಾರಸ್ವಾಮಿ ಮಾತ್ರ ಚಿತ್ರದ ಯಾವುದೇ ಪ್ರಮೋಷನ್, ಅಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೇ ಇರುವುದು ದರ್ಶನ್ ಜತೆಗಿನ ಮನಸ್ತಾಪ ಕಾರಣವೇ ಎಂಬ ವದಂತಿಗಳು ಹಬ್ಬಿತ್ತು.ಚಿತ್ರ ಬಿಡುಗಡೆಗೆ ಎರಡು ವಾರ ಮಾತ್ರವೇ ಬಾಕಿಯಿದ್ದು, ಇನ್ನೂ ನಿಖಿಲ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಕೂಡಾ ಮಾಡಿರಲಿಲ್ಲ. ನಿನ್ನೆಯಿಂದಷ್ಟೇ ಡಬ್ಬಿಂಗ್ ಶುರು ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಎಲ್ಲದಕ್ಕೂ ಸ್ಪಷ್ಟನೆ ನೀಡಿದ್ದಾರೆ.ನಾನು ಚುನಾವಣೆ ಕೆಲಸಗಳಲ್ಲಿ