ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಯಾವುದೇ ಸಭೆ-ಸಮಾರಂಭ ನಡೆಸುವಂತಿಲ್ಲ. ಹೀಗಾಗಿ ಅದ್ಧೂರಿಯಾಗಿ ನಡೆಸಲು ಉದ್ದೇಶಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಮದುವೆಯೂ ಅನಿಶ್ಚಿತತೆಯಲ್ಲಿದೆ.ಈ ಬಗ್ಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ನಿಖಿಲ್, ಮದುವೆ ಏಪ್ರಿಲ್ 17 ರಂದು ನಿಗದಿಯಾಗಿದೆ. ಆ ಸಮಯದಲ್ಲಿ ಎಲ್ಲವೂ ಸರಿಯಾಗಬಹುದು ಎಂದು ನಿರೀಕ್ಷಿಸೋಣ.ಒಂದು ವೇಳೆ ಸರಿಯಾಗದೇ ಇದ್ದರೂ ಈಗಿನ ಪ್ರಕಾರ ನಿಗದಿತ ದಿನಾಂಕದಲ್ಲೇ ಮದುವೆ ನಡೆಯಲಿದೆ. ಆದರೆ