ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಸ್ಯಾಂಡಲ್ ವುಡ್ ಪದಾರ್ಪಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನಿರಂಜನ್ ಸುಧೀಂದ್ರ ಅಭಿನಯದ ಚೊಚ್ಚಲ ಸಿನಿಮಾ ಅನೌನ್ಸ್ ಆಗಿದೆ. ಕಳೆದ ಕೆಲವು ದಿನಗಳಿಂದ ನಿರಂಜನ್ ವರ್ಕೌಟ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಚೆನ್ನಾಗಿ ದೇಹ ಹುರಿಗೊಳಿಸಿಕೊಂಡು ಚಿತ್ರರಂಗಕ್ಕೆ ಅಣಿಯಿಡಲು ಎಲ್ಲಾ ತಯಾರಿ ನಡೆಸಿದ್ದ ನಿರಂಜನ್ ಈಗ ಸೂಪರ್ ಸ್ಟಾರ್ ಎನ್ನುವ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ. ಈ