ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಈ ಬಾರಿ ಬರ್ತ್ ಡೇ ಆಚರಿಸಿಕೊಳ್ಳುತ್ತಿಲ್ಲ. ನಾಳೆ ಅವರ ಹುಟ್ಟುಹಬ್ಬವಿದ್ದು, ಯಾವುದೇ ಗೌಜಿ ಗದ್ದಲಗಳಿಲ್ಲದೆ ಸುಮ್ಮನಿರಲು ಶಿವಣ್ಣ ನಿರ್ಧರಿಸಿದ್ದಾರೆ.ಅದಕ್ಕೆ ಕಾರಣ ಅಮ್ಮ ಪಾರ್ವತಮ್ಮ ರಾಜ್ ಕುಮಾರ್ ಸಾವು. ಕೇಕ್ ಕಟ್ ಮಾಡಿ, ಹಾರ ತುರಾಯಿ ಹಾಕುವ ಬದಲು ಶಿವಣ್ಣ ಕಡೆಯಿಂದ ಈ ಬಾರಿ ಸಮಾಜ ಸೇವೆ ನಡೆಯಲಿದೆ. ಅವರ ಅಭಿನಯದ ಟಗರು ಚಿತ್ರತಂಡ ಹುಟ್ಟುಹಬ್ಬದ ಪ್ರಯುಕ್ತ ಸ್ವಲ್ಪ ಮೊತ್ತದ ಹಣವನ್ನು ದೇಣಿಗೆಯಾಗಿ ನೀಡಿದೆ.ಅಲ್ಲದೆ,