ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸುತ್ತ ಸಿನಿಮಾ ಮಾಡುವ ನಿರ್ಮಾಪಕರು ಅನುಮತಿಗಾಗಿ ಗೌರಿ ಕುಟುಂಬದ ಕಡೆಗೆ ಸುಳಿಯುವುದೇ ಬೇಕಾಗಿಲ್ಲ. ಯಾರಿಗೂ ಅನುಮತಿ ನೀಡಲ್ಲ ಎಂದು ಗೌರಿ ತಾಯಿ ಇಂದಿರಾ ಲಂಕೇಶ್ ಸ್ಪಷ್ಟವಾಗಿ ಹೇಳಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿದೆ. ಈ ಪ್ರಕರಣದ ಬಗ್ಗೆ ಹಲವು ನಿರ್ಮಾಪಕರು ಸಿನಿಮಾ ಮಾಡಲು ಅನುಮತಿ ಕೇಳಿ ಬರುತ್ತಿದ್ದಾರೆ. ಆದರೆ ವಿಚಾರಣೆ ಹಂತದಲ್ಲಿರುವುದರಿಂದ ಅಡ್ಡಿಯಾಗುತ್ತದೆಂದು ಯಾರಿಗೂ ಸಿನಿಮಾ ಮಾಡಲು