ಬೆಂಗಳೂರು : ನಟಿ ಮೇಘನಾ ಕುಟುಂಬದಲ್ಲಿಂದು ಸಂಭ್ರಮ ಮನೆ ಮಾಡಿದೆ. ಏಕೆಂದರೆ ಇಂದು ಜ್ಯೂನಿಯರ್ ಚಿರುವಿನ ನಾಮಕರಣ. ದಿವಂಗತ ನಟ ಚಿರಂಜೀವಿ ಸರ್ಜಾ ಪುತ್ರನ ಹೆಸರು ಬಹಿರಂಗವಾಗಿದೆ. ಜ್ಯೂನಿಯರ್ ಚಿರುಗೆ ರಾಯನ್ ರಾಜ್ ಸರ್ಜಾ ಎಂದು ನಾಮಕರಣ ಮಾಡಲಾಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಾಮಕರಣ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂಭ್ರಮದಲ್ಲಿ ಸರ್ಜಾ ಕುಟುಂಬ ಭಾಗಿಯಾಗಿದೆ. ಧ್ರುವ ಸರ್ಜಾ, ಪತ್ನಿ ಪ್ರೇರಣಾ, ಮೇಘನಾ ರಾಜ್ ಅಜ್ಜಿ ಲಕ್ಷ್ಮಿ ದೇವಮ್ಮ ಸೇರಿದಂತೆ ಹಲವರು