ರೌಡಿ ಅವತಾರ ತಾಳಿದ್ದಾರೆ ನರ್ಸ್ ಜಯಲಕ್ಷ್ಮಿ

Navya K M| Last Updated: ಬುಧವಾರ, 29 ಜೂನ್ 2016 (09:08 IST)
ವಿವಾದದ ಮೂಲಕವೇ ಪರಿಚಿತರಾಗಿ ಅದರ ಮೂಲಕವೇ ಕನ್ನಡ ಕಿರುತೆರೆ ಅಂಗಳಕ್ಕೆ ಬಂದವರು ನರ್ಸ್ ಜಯಲಕ್ಷ್ಮೀ. ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಜಯಕ್ಕ ಕನ್ನಡಿಗರಿಗ ಇನ್ನಷ್ಟು ಹತ್ತಿರವಾಗಿದ್ದರು.ಅಲ್ಲದೇ ಇದೇ ಕಾರ್ಯಕ್ರಮದ ಮೂಲಕ ಜಯಕ್ಕಂಗೆ ಇನ್ನು ಅನೇಕ ಅವಕಾಶಗಳು ಒಲಿದು ಬಂದವು. ಡ್ಯಾನ್ಸ್ ರಿಯಾಲಿಟಿ ಶೋದಲ್ಲೂ ಭಾಗವಹಿಸಿದ್ರು. ಇದೀಗ ಹಿರಿತರೆಗೆ ಕಾಲಿಟ್ಟಿದ್ದಾರೆ ಜಯಕ್ಕ.
ಹೌದು... ಬಿಗ್ ಬಾಸ್ ಶೋದ ಮೂಲಕ ಅಭಿನಯ ಕ್ಷೇತ್ರಕ್ಕೆ ಕಾಲಿಟ್ಟ ಜಯಕ್ಕ ಅವರಿಗೆ  ಬಿಗ್ ಬಾಸ್ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಅನೇಕ ಧಾರಾವಾಹಿಗಳಲ್ಲಿ ಅಭಿನಯಿಸೋದಕ್ಕೆ ಅವಕಾಶಗಳು ಒಲಿದು ಬಂದವು. ಜಯಕ್ಕ ಕೂಡ ಸಿಕ್ಕ ಅವಕಾಶಗಳನ್ನು ಚೆನ್ನಾಗಿಯೇ ಬಳಸಿಕೊಂಡು ಅಬಿನಯದಲ್ಲೂ ನಾನೇನು ಕಮ್ಮಿ ಇಲ್ಲ ಅಂತಾ ತೋರಿಸಿಕೊಟ್ರು. ಸದ್ಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಜಯಕ್ಕ ಈಗ ಹಿರಿತೆರೆಗೆ ಕಾಲಿಟ್ಟಿದ್ದಾರೆ. ಹುಬ್ಬಳ್ಳಿ ಜಂಕ್ಷನ್ ಅನ್ನೋ ಸಿನಿಮಾದಲ್ಲಿ ನರ್ಸ್ ಜಯಮ್ಮ ಅಭಿನಯಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಅದರಲ್ಲಿ ಜಯಲಕ್ಷ್ಮೀ ಅವರು ಪಕ್ಕಾ ಲೇಡಿ ರೌಡಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
 
ಲೇಡಿ ಡಾನ್ ರೀತಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಕೈಯಲ್ಲಿ ಲಾಂಗ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದಾರೆ.ಜಯಕ್ಕನ ಪೋಸ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಕೇರಳದ ಕೊಟ್ಟೈಂ ನಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾವಂತೆ. ಈ ಸಿನಿಮಾವನ್ನು ಮುತ್ತುರಾಜ್ ಅನ್ನೋರು ನಿರ್ದೇಶನ ಮಾಡುತ್ತಿದ್ದಾರೆ. ಜುಲೈ 20 ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :