ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಗೆಳೆತನಕ್ಕೆ ಸದಾ ಸಾಥ್ ನೀಡುವ, ಎಲ್ಲ ವ್ಯಹಾರದಾಚೆಗೆ ಪ್ರೀತಿ ಸೂಸುವ ಸ್ವಭಾವದ ದರ್ಶನ್ ಅಂಥಾದ್ದೇ ಸ್ನೇಹವನ್ನು ಸಂದೇಶ್ ಪ್ರೊಡಕ್ಷನ್ ಬ್ಯಾನರಿನತ್ತಲೂ ಇಟ್ಟುಕೊಂಡಿದ್ದಾರೆ. ಈ ಸ್ನೇಹ, ಪ್ರೀತಿಯ ಕಾರಣದಿಂದಲೇ ಈ ಹಿಂದೆ ಈ ಬ್ಯಾನರಿನಲ್ಲಿ ಅವರು ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರೆಡೂ ಕೂಡಾ ಸೂಪರ್ ಹಿಟ್ ಸಿನಿಮಾಗಳಾಗಿ ದಾಖಲಾಗಿದ್ದವು. ಒಡೆಯ