ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಂಡಿದೆ.ಈ ಸಿನಿಮಾದ ಟೀಸರ್, ಟೈಟಲ್ ಹಾಡಿಗೆ ಈಗಾಗಲೇ ಅಭಿಮಾನಿಗಳು ದಾಖಲೆಯ ಪ್ರಮಾಣದಲ್ಲಿ ಲೈಕ್ ಕೊಟ್ಟಿದ್ದಾರೆ. ಅಂತೂ ಒಡೆಯ ಬಗ್ಗೆ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆಯಿದೆ ಎನ್ನುವುದು ಸಾಬೀತಾಗಿದೆ.ಇದರ ನಡುವೆ ಒಡೆಯನ ಇನ್ನೊಂದು ಹಾಡು ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಇದೇ ಶನಿವಾರ ಸಂಜೆ 3.33 ಕ್ಕೆ ಒಡೆಯ ಸಿನಿಮಾದ ಡ್ಯುಯೆಟ್ ಹಾಡೊಂದು ಲಾಂಚ್ ಆಗುತ್ತಿದೆ.