ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ ಓಲ್ಡ್ಮಾಂಕ್ ಚಿತ್ರದ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ್ದ, ಪುನೀತ್ ರಾಜ್ಕುಮಾರ್, ಶ್ರೀನಿ ಬಹಳ ದಿನಗಳಿಂದ ನನಗೆ ಪರಿಚಯ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಚೆನ್ನಾಗಿದೆ. ಚಿತ್ರ ಕೂಡ ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಈ ಚಿತ್ರದ ಕಥೆ ಆರಂಭವಾಗುವುದು ವೈಕುಂಠದಲ್ಲಿ. ಮಹಾವಿಷ್ಣು ಹಾಗೂ ನಾರದರ