ಚೆನ್ನೈ: ಕೊರೋನಾದಿಂದಾಗಿ ಥಿಯೇಟರ್ ಗಳ ಮೇಲೆ ಸರ್ಕಾರ ನಿರ್ಬಂಧ ವಿಧಿಸಿರುವುದರಿಂದ ಸ್ಟಾರ್ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ ಇದನ್ನೇ ಒಟಿಟಿ ಫ್ಲ್ಯಾಟ್ ಫಾರಂಗಳು ಬಂಡವಾಳವಾಗಿಸಿದೆ.ಬಿಡುಗಡೆಗೆ ಸಿದ್ಧವಾಗಿ ನಿಂತಿರುವ ಸ್ಟಾರ್ ಸಿನಿಮಾಗಳಿಗೆ ಒಟಿಟಿಯಲ್ಲಿ ಭರ್ಜರಿ ಬೇಡಿಕೆ ಬರುತ್ತಿದೆ. ಇತ್ತೀಚೆಗೆ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾವನ್ನು 100 ಕೋಟಿ ರೂ.ಗೆ ಕೊಳ್ಳಲು ಒಟಿಟಿ ಆಫರ್ ಬಂದಿತ್ತು ಎಂಬುದು ಸುದ್ದಿಯಾಗಿತ್ತು.ಇದೀಗ ತಮಿಳು ನಟ ಅಜಿತ್ ನಾಯಕರಾಗಿರುವ ವಲಿಮೈ ಸಿನಿಮಾಗೂ ಅಂತಹದ್ದೇ ಭರ್ಜರಿ ಆಫರ್