ಟಿವಿಗೂ ಕಾಲಿಟ್ಟ ಕಿಚ್ಚ ಸುದೀಪ್ ಅಭಿನಯದ ‘ಪೈಲ್ವಾನ್’

ಬೆಂಗಳೂರು| Krishnaveni K| Last Modified ಸೋಮವಾರ, 23 ಡಿಸೆಂಬರ್ 2019 (08:53 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷೆಗಳಲ್ಲಿ ಬಿಡುಗಡೆಯಾದ ಪೈಲ್ವಾನ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾ ಪೈರಸಿ ಹಾವಳಿ ನಡುವೆಯೂ ಮೇಲೆದ್ದು ಸದ್ದು ಮಾಡಿತ್ತು.
 

ಇದೀಗ ಆ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಈ ಸಿನಿಮಾದ ಪ್ರಸಾರ ಹಕ್ಕು ಜೀ ಕನ್ನಡ ಖರೀದಿಸಿತ್ತು. ಇದೀಗ ಕನ್ನಡ ಕಿರುತೆರೆಯಲ್ಲಿ ಇದೇ ಮೊದಲ ಬಾರಿಗೆ ಪೈಲ್ವಾನ್ ಸಿನಿಮಾ ಪ್ರಸಾರವಾಗಲಿದೆ.
 
ಈಗಾಗಲೇ ಹಿಂದಿ ಕಿರುತೆರೆಯಲ್ಲಿ ಹಿಂದಿ ಅವತರಣಿಕೆ ಪ್ರಸಾರವಾಗಿದೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಪ್ರಸಾರವಾಗಲಿದೆ. ಆದರೆ ಯಾವಾಗ ಎಂದು ವಾಹಿನಿ ಇನ್ನೂ ದಿನಾಂಕ ಪ್ರಕಟಿಸಿಲ್ಲ.
ಇದರಲ್ಲಿ ಇನ್ನಷ್ಟು ಓದಿ :