ಹೃದಯಾಘಾತದಿಂದ ನಿಧನರಾಗಿರುವ ಪುನೀತ್ಗೆ ಪಾಕಿಸ್ತಾನದ ಅಭಿಮಾನಿಯೊಬ್ಬರು ಗಾನ ನಮನ ಸಲ್ಲಿಸಿದ್ದಾರೆ. ‘ರಾಜಕುಮಾರ’ ಸಿನಿಮಾದ ‘ಗೊಂಬೆ ಹೇಳುತೈತೆ..’ ಹಾಗೂ ‘ಮಿಲನ’ ಸಿನಿಮಾದ ‘ನಿನ್ನಿಂದಲೇ ನಿನ್ನಿಂದಲೇ..’ ಗೀತೆಯನ್ನು ಹೇಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪುನೀತ್ ಅಭಿನಯಕ್ಕೆ ಮರುಳಾಗಿದ್ದರು. ಅವರ ಅನೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿವೆ. ಅವುಗಳನ್ನು ನೋಡಿದ ಬೇರೆ ರಾಜ್ಯ-ದೇಶಗಳ