ಬೆಂಗಳೂರು: ಸ್ಯಾಂಡಲ್ ವುಡ್, ಕಿರುತೆರೆ, ಟಾಲಿವುಡ್ ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ನಟಿ ಪವಿತ್ರಾ ಲೋಕೇಶ್ ಮರು ಮದುವೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಈಗ ವೈರಲ್ ಆಗಿದೆ.ತೆಲುಗು ನಟ ನರೇಶ್ ಜೊತೆ ಪವಿತ್ರಾ ಮದುವೆಯಾಗಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ನಟ ನರೇಶ್ ಗೆ ಇದು ನಾಲ್ಕನೇ ಮದುವೆ ಎಂಬ ಸುದ್ದಿಯಿದೆ. ನರೇಶ್ ಜೊತೆ ಪವಿತ್ರಾ ಕೆಲವು ಟಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದೇ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಗುಟ್ಟಾಗಿ ಮದುವೆಯಾಗಿದ್ದಾರೆ