Widgets Magazine

ಮಲ್ಟಿಸ್ಟಾರ್ ಚಿತ್ರದಲ್ಲಿ ಪವನ್ ಕಲ್ಯಾಣ; ಮತ್ತೊಬ್ಬ ನಟ ಯಾರು ಗೊತ್ತಾ?

ಹೈದರಾಬಾದ್| pavithra| Last Modified ಬುಧವಾರ, 18 ನವೆಂಬರ್ 2020 (10:39 IST)
ಹೈದರಾಬಾದ್ : ಮಲಯಾಳಂ ಸೂಪರ್ ಹಿಟ್ ಚಿತ್ರ ‘ಅಯ್ಯಪ್ಪನೂಮ್ ಕೊಶಿಯಮ್’ ಚಿತ್ರದ ರಿಮೇಕ್ ಗೆ ಪವನ್ ಕಲ್ಯಾಣ್ ಈಗಾಗಲೇ ಓಕೆ ಎಂದಿದ್ದಾರೆ. ಸೀತಾರಾ ಎಂಟರ್ ಟೈನ್ ನೆಂಟ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ.

ಪವನ್ ಕಲ್ಯಾಣ್  ಅವರ ‘ಪಿಂಕ್’ ರಿಮೇಕ್ ಚಿತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಈಗ ಅದೇ ಮಾದರಿಯಲ್ಲಿ  ‘ಅಯ್ಯಪ್ಪನೂಮ್ ಕೊಶಿಯಮ್’ ಚಿತ್ರವನ್ನು ಬದಲಾವಣೆ ಮಾಡಲಾಗುತ್ತಿದೆ ಎಂಬ ವದಂತಿಗಳಿವೆ. ‘ಅಯ್ಯಪ್ಪನೂಮ್ ಕೊಶಿಯಮ್’ ಮಲ್ಟಿ ಸ್ಟಾರ್ ಚಿತ್ರ. ಆದರೆ ತೆಲುಗು ರಿಮೇಕ್ ನಲ್ಲಿ ಇದು ಸಿಂಗಲ್ ಸ್ಟಾರ್ ಚಿತ್ರ ಆಗಲಿದೆ ಎಂಬ ವದಂತಿ ಇತ್ತು.

ಆದರೆ ಈಗ ಪವನ್ ಅವರಿಗೆ ಸಮಾನ ಪ್ರಾಮುಖ್ಯತೆ ಇರುವ ಮತ್ತೊಬ್ಬ ನಾಯಕನಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಮೂಲಕ ಪವನ್ ರಿಮೇಕ್ ಮಲ್ಟಿಸ್ಟಾರ್ ಚಿತ್ರ ಮಾಡಲು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ ಆ ನಾಯಕ ಯಾರು ಎಂಬುದು ಇನ್ನು ಸ್ಪಷ್ಟವಾಗಿಲ್ಲ.ಇದರಲ್ಲಿ ಇನ್ನಷ್ಟು ಓದಿ :