ಒಂದೇ ಚಿತ್ರದಲ್ಲಿ ಒಂದಕ್ಕೊಂದು ತದ್ವಿರುದ್ಧವಾದ ಪಾತ್ರಗಳಿದ್ದರೆ ಅದು ನಾಯಕ ಮಾತ್ರವಲ್ಲ, ಯಾವ ಕಲಾವಿದನಿಗಾದರೂ ಸವಾಲಿನ ಸಂಗತಿ. ಉಡುಂಬಾ ಚಿತ್ರದ ನಾಯಕ ಪವನ್ ಶೌರ್ಯ ಅವರಿಗೂ ಕೂಡಾ ಇಂಥಾದ್ದೊಂದು ಸವಾಲು ಎದುರಾಗಿತ್ತಂತೆ. ಯಾಕೆಂದರೆ ಇಲ್ಲಿಯೂ ಕೂಡಾ ಒಂದಷ್ಟು ಭಿನ್ನ ಶೇಡುಗಳಿರೋ ಪಾತ್ರಗಳೇ ಅವರನ್ನು ಅರಸಿ ಬಂದಿದ್ದವು. ಕೇವಲ ನಟನೆಯಲ್ಲಿ ಮಾತ್ರವಲ್ಲದೇ ದೈಹಿಕವಾಗಿಯೂ ಕಸರತ್ತು ನಡೆಸಬೇಕಾದ ಅನಿವಾರ್ಯತೆಯೂ ಪವನ್ ಪಾಲಿಗೆ ಬಂದೊದಗಿತ್ತಂತೆ. ಅದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿ ತಮ್ಮ ವರ್ಷಾಂತರಗಳ ಶ್ರಮವನ್ನು ಪ್ರೇಕ್ಷಕರು ಯಾವ