ಬೆಂಗಳೂರು: ರಾಜರಾಜೇಶ್ವರಿ ನಗರ ಚುನಾವಣೆ ಸ್ಪರ್ಧಿ ಮುನಿರತ್ನ ಪರ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೋಡಲು ಬಂದ ಜನಸಾಗರ ನೋಡಿದರೆ ಇವರು ಕೊರೋನಾವನ್ನೇ ಮರೆತರೇನೋ ಎಂಬ ಸಂಶಯ ಮೂಡಿದ್ದು ನಿಜ.ಮುನಿರತ್ನ ಜತೆಗೆ ತೆರೆದ ವಾಹನದಲ್ಲಿ ದರ್ಶನ್, ನಟಿ ಅಮೂಲ್ಯ, ಪತಿ ಜಗದೀಶ್ ಸೇರಿದಂತೆ ತಾರಾ ದಂಡು ಬಂದಿತ್ತು. ಈ ವೇಳೆ ನೂರಾರು ಜನರು ರಸ್ತೆಯಲ್ಲಿ ಅವರ ತೆರೆದ ವಾಹನಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಹಲವರು ಮಾಸ್ಕ್ ಧರಿಸಿರಲಿಲ್ಲ.