ಬೆಂಗಳೂರು: ಥಿಯೇಟರ್ ಓಪನ್ ಆದ ಖುಷಿಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಪೈರಸಿ ತಲೆನೋವೂ ಶುರುವಾಗಿದೆ.ಇದಕ್ಕೂ ಮೊದಲೂ ಕೂಡಾ ಸ್ಟಾರ್ ಸಿನಿಮಾಗಳು ಬಿಡುಗಡೆಯಾದಾಗ ಪೈರಸಿ ಕಾಟ ಇದ್ದೇ ಇರುತ್ತಿತ್ತು. ಇದಕ್ಕೂ ಮೊದಲು ಪೊಗರು, ರಾಬರ್ಟ್ ಸಿನಿಮಾಗೂ ಪೈರಸಿ ಕಾಟ ಎದುರಾಗಿತ್ತು. ಇದೀಗ ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಕೋಟಿಗೊಬ್ಬ 3 ಸಿನಿಮಾಗೂ ಪೈರಸಿ ಆತಂಕ ಶುರುವಾಗಿದೆ.ಮೊದಲೇ ನಷ್ಟದಲ್ಲಿರುವ ಚಿತ್ರರಂಗಕ್ಕೆ ಪೈರಸಿಕೋರರು ಹೊಟ್ಟೆ ಮೇಲೆ ಹೊಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದರ ಬಗ್ಗೆ ಚಿತ್ರರಂಗದ ಮಂದಿ ಒಟ್ಟಾಗಿ ಕಾರ್ಯಪ್ರವೃತ್ತರಾಗುವ